ಜನಶಕ್ತಿ
ಕಾರ್ಮಿಕರ, ರೈತರ ಮತ್ತು ದಲಿತವರ್ಗದವರ ಸಂಘಟನೆ ಮತ್ತು ಪುರೋಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಕಮ್ಯೂನಿಷ್ಟ್ ಪಕ್ಷದಿಂದ 1946ರಲ್ಲಿ ಹುಬ್ಬಳಿಯಲ್ಲಿ ಆರಂಭವಾದ ವಾರಪತ್ರಿಕೆ. ಡಿಮೈ ಫೋಲಿಯೋ ಆಕಾರದ ಎಂಟು ಪುಟಗಳ ಪತ್ರಿಕೆಯಾಗಿ ಕರ್ನಾಟಕದ ರೈತರು ಮತ್ತು ಕಾರ್ಮಿಕರಲ್ಲಿ ಪ್ರಚಾರದಲ್ಲಿತ್ತು. ಇದರ ಮೊದಲ ಸಂಪಾದಕರು ಕುಳಕುಂದ ಶಿವರಾಯರು (ನಿರಂಜನ). ಸುಮಾರು ಒಂದುವರ್ಷದ ಅನಂತರ ಸದಾಶಿವ ಇದರ ಸಂಪಾದಕತ್ವನ್ನು ವಹಿಸಿಕೊಂಡರು. 1948ರಲ್ಲಿ ದೇಶಾದ್ಯಂತ ಕಮ್ಯೂನಿಷ್ಟರು ದಸ್ತರಿಯಾದಾಗ ಇದರ ಪ್ರಕಟಣೆ ನಿಂತುಹೋಯಿತು.

	ಇದು ಮತ್ತೆ 1952ರಲ್ಲಿ ಎಂ. ಸಿ. ನರಸಿಂಹನ್‍ರವರ ಸಂಪಾದಕತ್ವದಲ್ಲಿ ಬೆಂಗಳೂರಿನಿಂದ ಪ್ರಕಟಣೆ ಆಗಲಾರಂಭಿಸಿತು. ಎರಡು ವರ್ಷಗಳ ಕಾಲ ನಡೆದು 1954ರಲ್ಲಿ ಮತ್ತೆ ನಿಂತುಹೋಯಿತು,. 1956ರ ನವೆಂಬರ್ ತಿಂಗಳಲ್ಲಿ ಸಿ.ಆರ್. ಕೃಷ್ಣರಾಯರು ಸಂಪಾದಕರಾಗಿ ಜನಶಕ್ತಿಯನ್ನು 9 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿಕೊಂಡು ಬಂದರು 1964ಶರಲ್ಲಿ ಮತ್ತೆ ಇದು ನಿಂತುಹೋಯಿತು.									(ಜಿ.ಎಚ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ